Index   ವಚನ - 702    Search  
 
ಭಕ್ತನಾದರೆ ಭವಂ ನಾಸ್ತಿಯಾಗಿರಬೇಕು, ಶರಣನಾದರೆ ಭಯಂ ನಾಸ್ತಿಯಾಗಿರಬೇಕು, ಲಿಂಗೈಕ್ಯವಾದರೆ ಲಯವನರಿಯದಿರಬೇಕು, ಈ ತ್ರಿವಿಧನಾಸ್ತಿಯಾಗಬೇಕು, ಕೂಡಲ ಚೆನ್ನಸಂಗಯ್ಯಾ.