Index   ವಚನ - 710    Search  
 
ಧರಣಿಜ[ನ]ರೆಲ್ಲರೂ ಭಕ್ತರೇ ಆಗಿ, ಪಾಷಾಣಂಗಳೆಲ್ಲವೂ ಲಿಂಗಂಗಳಾಗಿ, ಆದಿ ಸೂತಕವೇದ್ಯನು ಭಕ್ತನು, ವಿರಕ್ತನು, ಮುಕ್ತನೆಂದೆನಿಸುವ, ತ್ರಿವಿಧ ಸೂತಕವ ಕಳೆದುಳಿದಲ್ಲದೆ ಕೂಡಲಚೆನ್ನಸಂಗನ ಹೊದ್ದಬಾರದು.