Index   ವಚನ - 712    Search  
 
ಕಾಯದೊಳಗೆ ಕಾಯವಾಗಿರ್ದೆಯಲ್ಲಾ ಹಂಸಾ, ಸಂಸಾರ ಮಾಯಾಪಾಶವ ಬಿಡಲಾರದೆ ಡಿಂಭವ ನೆಚ್ಚಿ ಕೆಟ್ಟೆಯಲ್ಲಾ ಹಂಸಾ. ಜೀವ ಶೂನ್ಯವಾಗಿ ಕೂಡಲಚೆನ್ನಸಂಗನ ಶರಣರು ಹೋದುದನರಿಯಾ ಹಂಸಾ.