Index   ವಚನ - 727    Search  
 
ಭಕ್ತನಾದರೆ ಕಿಂಕಿಲನಾಗಿರಬೇಕು. ಮಾಹೇಶ್ವರನಾದರೆ ಆದಿ ಅನಾದಿಯನರಿಯದಿರಬೇಕು. ಪ್ರಸಾದಿಯಾದರೆ ಒಡಲಗುಣವಿರಹಿತನಾಗಿರಬೇಕು. ಪ್ರಾಣಲಿಂಗಿಯಾದರೆ ಪ್ರಸಾದವಿಲ್ಲದಿರಬೇಕು. ಶರಣನಾದರೆ ನಿಸ್ಸಂಗಿಯಾಗಿರಬೇಕು. ಐಕ್ಯನಾದರೆ ಬಯಲು ಬಯಲಾಗಿರಬೇಕು. ಇಂತೀ ಸ್ಥಲವನರಿದಲ್ಲದೆ, ಕೂಡಲಚೆನ್ನಸಂಗನಲ್ಲಿ ಸುಸಂವೇದ್ಯನೆಂದೆನಿಸಬಾರದು.