Index   ವಚನ - 745    Search  
 
ಭಕ್ತನೆಂದೆನಿಸಿಕೊಂಬುದಯ್ಯಾ ಭಕ್ತಿವಿಡಿದು, ಮಾಹೇಶ್ವರನೆನಿಸಿಕೊಂಬುದಯ್ಯಾ ನಿಷ್ಠೆವಿಡಿದು, ಪ್ರಸಾದಿಯೆನಿಸಿಕೊಂಬುದಯ್ಯಾ ಅವಧಾನವಿಡಿದು, ಪ್ರಾಣಲಿಂಗಿಯೆನಿಸಿಕೊಂಬುದಯ್ಯಾ ಅನುಭಾವವಿಡಿದು, ಶರಣನೆನಿಸಿಕೊಂಬುದಯ್ಯಾ [ಆನಂದದಿಂದ], ಐಕ್ಯನೆನಿಸಿಕೊಂಬುದಯ್ಯಾ ಸಮರಸದಿಂದ. ಇಂತೀ ಷಡುಸ್ಥಲಸಾಹಿತ್ಯನಾಗಿ, ಕೂಡಲಚೆನ್ನಸಂಗಯ್ಯನಲ್ಲಿ ಸಹಜನೆನಿಸಿಕೊಂಬುದಯ್ಯಾ.