ಕುಲವಳಿದು, ಛಲವಳಿದು,
ಮದವಳಿದು, ಮಚ್ಚರವಳಿದು,
ಆತ್ಮತೇಜವಳಿದು, ಸರ್ವಾಹಂಭಾವವಳಿದು,
ನಿಜ ಉಳಿಯಿತ್ತು.
ಲಿಂಗಜಂಗಮವೆಂಬ ಶಬ್ದವಿಡಿದು
ಸಾಧ್ಯವಾಯಿತ್ತು ನೋಡಾ,
ತಾನಳಿದು ತಾನುಳಿದು ತಾನು
ತಾನಾದ ಸಹಜ ನಿಜಪದವಿಯಲ್ಲಿ
ಕೂಡಲಚೆನ್ನಸಂಗ ಲಿಂಗೈಕ್ಯವು.
Art
Manuscript
Music
Courtesy:
Transliteration
Kulavaḷidu, chalavaḷidu,
madavaḷidu, maccaravaḷidu,
ātmatējavaḷidu, sarvāhambhāvavaḷidu,
nija uḷiyittu.
Liṅgajaṅgamavemba śabdaviḍidu
sādhyavāyittu nōḍā,
tānaḷidu tānuḷidu tānu
tānāda sahaja nijapadaviyalli
kūḍalacennasaṅga liṅgaikyavu.