Index   ವಚನ - 748    Search  
 
ಹೃತ್ಕಮಲಕರ್ಣಿಕೆಯ ಕುಹರದಲೊಮ್ಮೆ ಪೃಥಗ್ಭಾವದಿಂದ ನೋಡಿ ಕಾಬನೆ ಶರಣನು? ವಕ್ತ್ರಾಶ್ರಯದ ಜಿಹ್ವೆಯ ಕೊನೆಯಲ್ಲಿ ಪರವಕ್ತ್ರನಾಗಿ ನೋಡಿ ನುಡಿವನೆ ಶರಣನು? ಪ್ರಕೃತಿ ತನುಗುಣರಹಿತ, ಸುಕೃತ ಶೂನ್ಯ, ಘನಮುಗ್ಧ ಮಹಂತ, ಕೂಡಲಚೆನ್ನಸಂಗಾ ಲಿಂಗೈಕ್ಯನು.