Index   ವಚನ - 750    Search  
 
ತನು ಸೋಂಕಿ ತನು ನಷ್ಟವಾಯಿತ್ತು, ಮನ ಸೋಂಕಿ ಮನ ನಷ್ಟವಾಯಿತ್ತು, ಧನ ಸೋಂಕಿ ಧನ ನಷ್ಟವಾಯಿತ್ತು, ಭಾವ ಸೋಂಕಿ ಭಾವ ನಷ್ಟವಾಯಿತ್ತು. ಇದು ಕಾರಣ ಕೂಡಲಚೆನ್ನಸಂಗಯ್ಯಾ, ಲಿಂಗ ಸೋಂಕಿ ಶರಣನ ಸಂದು ನಷ್ಟವಾಯಿತ್ತು, ನಿಮ್ಮೊಳಗೇಕಾರ್ಥವಾಯಿತ್ತು.