Index   ವಚನ - 765    Search  
 
ಪ್ರಮಥವೇದಿಗಳೆಲ್ಲರೂ ಗತಿಯಲೆ ಸಿಲುಕಿದರು. ಅತೀತ ಅನಾಗತವೆಂಬ ನುಡಿಯಲೆ ಸಿಲುಕಿದರು. ಶ್ರುತಿವಂತರೆಲ್ಲರೂ ಆಗಮದಲ್ಲಿ ಸಿಲುಕಿದರು. ಇಂಥವನೆ ಲಿಂಗೈಕ್ಯನು? ನುಡಿದ ನುಡಿಯ ನಡೆಯನು, ನಡೆದ ನಡೆಯ ನುಡಿಯನು, ಬಂದಲ್ಲಿ ಬಾರನು, ನಿಂದಲ್ಲಿ ನಿಲ್ಲನು, ನಿಸ್ಸೀಮನು ಕೂಡಲಚೆನ್ನಸಂಗಾ ಲಿಂಗೈಕ್ಯನು.