Index   ವಚನ - 767    Search  
 
ಪ್ರಾಣಲಿಂಗವೆಂಬೆನೆ ಪ್ರಾಣದ ಹಂಗಿನ ಲಿಂಗ, ಲಿಂಗಪ್ರಾಣವೆಂಬೆನೆ ಲಿಂಗದ ಹಂಗಿನ ಪ್ರಾಣ, ಲಿಂಗ ಪ್ರಾಣವೆಂಬ ಸಂದು ಸಮನಿಸದು ಕೂಡಲ ಚೆನ್ನಸಂಗನೆಂಬ ಲಿಂಗೈಕ್ಯಂಗೆ.