ಲಿಖಿತಕ್ಕೆ ಲಿಖಿತ ಮಹಾಲಿಖಿತವುಂಟೆಂಬೆನೆ?
ಲಿಂಗ ಸಂಸಾರಿ,
ಲಿಂಗವಿಲ್ಲೆಂಬೆನೆ? ಅಂಗ ಸಂಸಾರಿ,
ಇಲ್ಲಿನ್ನಾವುದ ಘನವೆಂಬೆ, ಆವುದ ಕಿರಿದೆಂಬೆ,
ತಾಳಸಂಪುಟಕ್ಕೆ ಬಾರದ ಘನವ?
ಸುಖಕ್ಕೆ ಸುಖ ತಾರುಗಂಡು, ಸಮಸುಖವಾಗಿ,
ಉಪಮಾತೀತ ತ್ರಿವಿಧ ಸಂಪತ್ತುಗಳೆಂಬ
ವಾಯುವಾಕುಳದಲ್ಲಿ,
ಆದಿ ಮಧ್ಯ ಅವಸಾನರಹಿತ ಅನಂತ ಶರಣ ಅಜಾತ,
ಕೂಡಲಚೆನ್ನಸಂಗಾ ನಿರ್ನಾಮ ಲಿಂಗೈಕ್ಯ.
Art
Manuscript
Music
Courtesy:
Transliteration
Likhitakke likhita mahālikhitavuṇṭembene?
Liṅga sansāri,
liṅgavillembene? Aṅga sansāri,
illinnāvuda ghanavembe, āvuda kiridembe,
tāḷasampuṭakke bārada ghanava?
Sukhakke sukha tārugaṇḍu, samasukhavāgi,
upamātīta trividha sampattugaḷemba
vāyuvākuḷadalli,
ādi madhya avasānarahita ananta śaraṇa ajāta,
kūḍalacennasaṅgā nirnāma liṅgaikya.