ಆದಿಯಾಧಾರವಾಗಿಹುದೇ ಘನ,
ಆ ಘನವ ವೇದಿಸಿದುದೇ ಮನ,
ಮನವು ಮಹದಲ್ಲಿ ನಿಂದುದೆ ಭಕ್ತಿ,
ಭಿನ್ನಭಾವಕ್ಕಿಚ್ಛೆದೋರದಿಹುದೆ ಆಚಾರ,
ತಟ್ಟು ಮುಟ್ಟು ತಾಗು ನಿರೋಧವಿಲ್ಲದಿಹುದೆ ಪೂಜೆ,
ಆಸೆ ರೋಷ ಹರುಷವಿಲ್ಲದಿಹುದೆ ಪ್ರಸಾದ,
ಕರಣಮಥನಕಿಚ್ಛೆ ತೋರದಿಹುದೆ ಅನುಭಾವ.
ಇಂತೀ ಸರ್ವಾಂಗದಲ್ಲಿ ಸಾಹಿತ್ಯವಾದ ನಿಜೈಕ್ಯಂಗೆ
ನಮೋ ನಮೋ ಎಂಬೆ ಕೂಡಲಚೆನ್ನಸಂಗಯ್ಯಾ.
Art
Manuscript
Music
Courtesy:
Transliteration
Ādiyādhāravāgihudē ghana,
ā ghanava vēdisidudē mana,
manavu mahadalli nindude bhakti,
bhinnabhāvakkicchedōradihude ācāra,
taṭṭu muṭṭu tāgu nirōdhavilladihude pūje,
āse rōṣa haruṣavilladihude prasāda,
karaṇamathanakicche tōradihude anubhāva.
Intī sarvāṅgadalli sāhityavāda nijaikyaṅge
namō namō embe kūḍalacennasaṅgayyā.