Index   ವಚನ - 803    Search  
 
ಲಿಂಗಸ್ಥಲವಿಲ್ಲದವರ ಭಕ್ತರೆಂಬೆ, ಗುರುಸ್ಥಲವಿಲ್ಲದವರ ಶಿಷ್ಯರೆಂಬೆ, ಪ್ರಸಾದಿಸ್ಥಲವಿಲ್ಲದವರ ಜಂಗಮವೆಂಬೆ, ಈ ತ್ರಿವಿಧಸ್ಥಲವಿಲ್ಲದವರ ಶರಣರೆಂಬೆ. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಭವಿಸಹಿತವಾಗಿದ್ದಾತನ ಲಿಂಗೈಕ್ಯನೆಂಬೆ.