Index   ವಚನ - 804    Search  
 
ಲಿಂಗದ್ರೋಹಿಯನೆ ಗುರುವೆಂಬೆ, ಗುರುದ್ರೋಹಿಯನೆ ಶಿಷ್ಯನೆಂಬೆ. ಸಮಯದ್ರೋಹಿಯನೆ ಭಕ್ತನೆಂಬೆ, ಪ್ರಸಾದದ್ರೋಹಿಯನೆ ಮಾಹೇಶ್ವರನೆಂಬೆ. ಇದು ಕಾರಣ, ಕೂಡಲಚೆನ್ನಸಂಗಯ್ಯಾ, ನಿಮ್ಮ ಶರಣ ಸರ್ವಾಂಗದ್ರೋಹಿಯ ಲಿಂಗೈಕ್ಯನೆಂದೆಂಬೆ.