Index   ವಚನ - 805    Search  
 
ಮನ ನಷ್ಟವಾದರೆ ಭಕ್ತನೆಂಬೆ, ಉಪದೇಶ ನಷ್ಟವಾದರೆ ಗುರುವೆಂಬೆ, ಭಾವ ನಷ್ಟವಾದರೆ ಲಿಂಗವೆಂಬೆ, ಗಮನ ನಷ್ಟವಾದರೆ ಜಂಗಮವೆಂಬೆ, ಅರ್ಪಿತ ನಷ್ಟವಾದರೆ ಪ್ರಸಾದಿಯೆಂಬೆ, ಆಚಾರ ನಷ್ಟವಾದರೆ ಐಕ್ಯನೆಂಬೆ. ಇಂತೀ ಷಡುಸ್ಥಲ ನಿಂದ ನಿಲವಿನ ಪರಿಣಾಮಪದವ ಕೂಡಲಚೆನ್ನಸಂಗಾ ನಿಮ್ಮ ಶರಣನೆ ಬಲ್ಲ.