ಮನ ನಷ್ಟವಾದರೆ ಭಕ್ತನೆಂಬೆ,
ಉಪದೇಶ ನಷ್ಟವಾದರೆ ಗುರುವೆಂಬೆ,
ಭಾವ ನಷ್ಟವಾದರೆ ಲಿಂಗವೆಂಬೆ,
ಗಮನ ನಷ್ಟವಾದರೆ ಜಂಗಮವೆಂಬೆ,
ಅರ್ಪಿತ ನಷ್ಟವಾದರೆ ಪ್ರಸಾದಿಯೆಂಬೆ,
ಆಚಾರ ನಷ್ಟವಾದರೆ ಐಕ್ಯನೆಂಬೆ.
ಇಂತೀ ಷಡುಸ್ಥಲ ನಿಂದ ನಿಲವಿನ
ಪರಿಣಾಮಪದವ
ಕೂಡಲಚೆನ್ನಸಂಗಾ ನಿಮ್ಮ ಶರಣನೆ ಬಲ್ಲ.
Art
Manuscript
Music
Courtesy:
Transliteration
Mana naṣṭavādare bhaktanembe,
upadēśa naṣṭavādare guruvembe,
bhāva naṣṭavādare liṅgavembe,
gamana naṣṭavādare jaṅgamavembe,
arpita naṣṭavādare prasādiyembe,
ācāra naṣṭavādare aikyanembe.
Intī ṣaḍusthala ninda nilavina
pariṇāmapadava
kūḍalacennasaṅgā nim'ma śaraṇane balla.
ಸ್ಥಲ -
ಐಕ್ಯನ ಮಾಹೇಶ್ವರಸ್ಥಲ