Index   ವಚನ - 806    Search  
 
ಸ್ಥಲ ಹೋಯಿತ್ತೆನಗೆ, ನಿಃಸ್ಥಲ ಹೋಯಿತ್ತೆನಗೆ ಗೋರಿಕಲ್ಲ ಮಾಡ ಹೋಯಿತ್ತೆನಗೆ, ಹೂವಿಮಾನ ಹೋಯಿತ್ತೆನಗೆ, ಬಸವ ಹೋದನೆನಗೆ, ಬಸವನ ಜಂಗಮ ಹೋದನೆನಗೆ. ಇನ್ನು ಬಸವಾಯೆಂದೆನಾದರೆ ಕೂಡಲಚೆನ್ನಸಂಗಾ ನಿಮ್ಮಾಣೆ.