ಸ್ವಯಮಜ್ಜನ, ಸ್ವಯಪೂಜೆ, ಸ್ವಯಾರೋಗಣೆ,
ಕೃತ್ಯ ಶಯನರತಿಮುಚ್ಯತೇ ಎಂದುದಾಗಿ
ನಾ ನೀನೆಂಬ ಸಂಶಯ ನಿಂದ ನಿಲವೆಂತಿದ್ದಿತೆಂದರೆ:
[ಪ್ರ]ಪಂಚ ಪರತಂತ್ರವ ಮೀರಿ,
ಭಾವವ ಬಿಟ್ಟು, ಘನರವಿಲೋಚನನಾಗಿ,
ಅರ್ಪಿತವೆ [ಭುಂಜಿತ], ಅನರ್ಪಿತವೆ ಅಭುಂಜಿತ,
ಸ್ಥೂಲ ಸೂಕ್ಷ್ಮ ಘನನಿತ್ಯವೆಂದರಿಯರು,
ಜಡವೇಷಲಾಂಛನಧಾರಿಗಳು.
ಕಾಯ ಜೀವ ಪ್ರಸಾದವಂ
ಬಿಟ್ಟು ಸರ್ವಭಾವ ರುಚಿ ಪ್ರಸಾದಿ,
ಕೂಡಲಚೆನ್ನಸಂಗಯ್ಯಾ ಆತ ಸರ್ವಾಂಗಪ್ರಸಾದಿ.