Index   ವಚನ - 815    Search  
 
ನವಖಂಡ ಪೃಥ್ವಿ ಚತುರ್ದಶಭುವನದೊಳಗೆ ಸ್ಥೂಲವಾವುದು, ಸೂಕ್ಷ್ಮವಾವುದು ಬಲ್ಲವರು ನೀವು ಹೇಳಿರಿ! ಕಾಲಚಕ್ರವೊ, ಕರ್ಮಚಕ್ರವೊ, ನಾದಚಕ್ರವೊ, ಬಿಂದುಚಕ್ರವೊ. ಇದರೊಳಗೆ ಆವುದ ಹಿರಿದೆಂಬೆನಾವುದ ಕಿರಿದೆಂಬೆ? ಬಲ್ಲವರು ನೀವು ಹೇಳಿರೆ! ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವೆಂಬಡೆ ಇಕ್ಕಿದ ರಾಟಳ ತುಂಬುತ ಕೆಡಹುತಲಿದ್ದೂದಾಗಿ. ಕೀಲು ಮುರಿದು, ರಾಟಳ ನಿಂದು, ನಿಶ್ಶೂನ್ಯವಾಗಿ ಕೂಡಲಚೆನ್ನಸಂಗನಲ್ಲಿ ಮಹಾಪ್ರಸಾದಿ.