Index   ವಚನ - 817    Search  
 
ಅರಿವರತು ಮರುಹು ನಷ್ಟವಾದರೆ ಭಕ್ತ, ಆಚಾರವರತು ಅನಾಚಾರ ನಷ್ಟವಾದರೆ ಜಂಗಮ, ಅರ್ಪಿತವರತು ಅನರ್ಪಿತ ನಷ್ಟವಾದರೆ ಪ್ರಸಾದಿ, ಪ್ರಸಾದವರತು ಪದಾರ್ಥ ನಷ್ಟವಾದರೆ ಪರಿಣಾಮಿ, ಪರಿಣಾಮವರತು ಪರಮಸುಖ ನೆಲೆಗೊಂಡರೆ ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು.