Index   ವಚನ - 816    Search  
 
ಸ್ವಯಮಜ್ಜನ, ಸ್ವಯಪೂಜೆ, ಸ್ವಯಾರೋಗಣೆ, ಕೃತ್ಯ ಶಯನರತಿಮುಚ್ಯತೇ ಎಂದುದಾಗಿ ನಾ ನೀನೆಂಬ ಸಂಶಯ ನಿಂದ ನಿಲವೆಂತಿದ್ದಿತೆಂದರೆ: [ಪ್ರ]ಪಂಚ ಪರತಂತ್ರವ ಮೀರಿ, ಭಾವವ ಬಿಟ್ಟು, ಘನರವಿಲೋಚನನಾಗಿ, ಅರ್ಪಿತವೆ [ಭುಂಜಿತ], ಅನರ್ಪಿತವೆ ಅಭುಂಜಿತ, ಸ್ಥೂಲ ಸೂಕ್ಷ್ಮ ಘನನಿತ್ಯವೆಂದರಿಯರು, ಜಡವೇಷಲಾಂಛನಧಾರಿಗಳು. ಕಾಯ ಜೀವ ಪ್ರಸಾದವಂ ಬಿಟ್ಟು ಸರ್ವಭಾವ ರುಚಿ ಪ್ರಸಾದಿ, ಕೂಡಲಚೆನ್ನಸಂಗಯ್ಯಾ ಆತ ಸರ್ವಾಂಗಪ್ರಸಾದಿ.