Index   ವಚನ - 822    Search  
 
ಆದಿಯ ಪ್ರಸಾದವ ಕೊಂಬಡೆ ಆತ್ಮದ್ರೋಹಿ, ಗುರುಪ್ರಸಾದವ ಕೊಂಬಡೆ ಗುರುದ್ರೋಹಿ, ಲಿಂಗ ಪ್ರಸಾದವ ಕೊಂಬಡೆ ಲಿಂಗದ್ರೋಹಿ, ಜಂಗಮ ಪ್ರಸಾದವ ಕೊಂಬಡೆ ಜಂಗಮದ್ರೋಹಿ, ಸಮಯ ಪ್ರಸಾದವ ಕೊಂಬಡೆ ಭಾವವಳಿಯದಾಗಿ, ಕೂಡಲಚೆನ್ನಸಂಗ[ನೆಂಬ] ಹಿರಿಯನ ಹಿರಿಯ ಮಗ ಸಂಗನಬಸವಣ್ಣನ ಪ್ರಸಾದಕ್ಕೆ ನಾನೆಂಬ ಓಗರ.