Index   ವಚನ - 821    Search  
 
ಶಬ್ದವೆಂಬುದು ಶ್ರೋತ್ರದೆಂಜಲು, ರೂಪೆಂಬುದು ನಯನದೆಂಜಲು, ವಾಸನೆಯೆಂಬುದು ನಾಸಿಕದೆಂಜಲು, ರುಚಿಯೆಂಬುದು ಜಿಹ್ವೆಯೆಂಜಲು, ಸ್ವರ್ಶವೆಂಬುದು ತ್ವಕ್ಕಿನೆಂಜಲು, ಮಾಡಲಾಗದು. ಲಿಂಗಕ್ಕೆ ರೂಪಿಲ್ಲ, ಜಂಗಮಕ್ಕೆ ಅಂಗವಿಲ್ಲ. ಪದಾರ್ಥವ ನೀಡಬಲ್ಲ ನಿಜೈಕ್ಯ ನಿಮ್ಮ ಶರಣ, ಕೂಡಲಚೆನ್ನಸಂಗಮದೇವಾ.