Index   ವಚನ - 827    Search  
 
ಲಿಂಗಸ್ಥಲವೆಂಬೆನೆ ಲಿಂಗಕ್ಕೆ ನೆಲೆಯಿಲ್ಲ. ಜಂಗಮಸ್ಥಲವೆಂಬೆನೆ ಜಂಗಮಕ್ಕೆ ಜನನವಿಲ್ಲ. ಪ್ರಸಾದಸ್ಥಲವೆಂಬೆನೆ ಪ್ರಸಾದಕ್ಕೆ ಪರಿಣಾಮವಿಲ್ಲ. ಈ ತ್ರಿವಿಧವೂ ಅಲ್ಲಾಯೆಂಬೆನೆ? ಕೂಡಲಚೆನ್ನಸಂಗನಲ್ಲಿ ಬಸವಣ್ಣನೇ ಬಲ್ಲ.