Index   ವಚನ - 828    Search  
 
ಸರ್ವಾಂಗವೂ ಲಿಂಗವಾದ ಆರೋಗಣೆಗೆ ಅಪ್ಯಾಯನವೆ ಕರಸ್ಥಲ. ನಿಂದುದೆ ಓಗರ, ಬಂದ ಪರಿಣಾಮವೆ ಪ್ರಸಾದವಾಗಿ ಹೇಳಲಿಲ್ಲದ ಕೇಳಲಿಲ್ಲದ ನಿರ್ಣಯ, ಕೂಡಲಿಲ್ಲ ಕಳೆಯಲಿಲ್ಲ ನೋಡಾ. ಇದು ಕಾರಣ, ಕೂಡಲಚೆನ್ನಸಂಗಮದೇವಾ, ಬಸವನನುಗ್ರಹಿಸಿಕೊಂಡ, ನಿಲುವಿನ ಸಹಜದಲ್ಲಿ ಉದಯಿಸಿದ ಲಿಂಗ ನಿರಂತರ.