ದಾಸ ಪ್ರಸಾದವ ದಾಸಿಮಯ್ಯಗಳು ಕೊಂಡರು,
ಪ್ರಾಣ ಪ್ರಸಾದವ ಸಿರಿಯಾಳ ಕೊಂಡ,
ಸಮತೆ ಪ್ರಸಾದವ ಬಲ್ಲಾಳ ಕೊಂಡ,
ಜಂಗಮ ಪ್ರಸಾದವ ಬಸವಣ್ಣ ಕೊಂಡ,
ಸಮಯ ಪ್ರಸಾದವ ಬಿಬ್ಬ ಬಾಚಯ್ಯಗಳು ಕೊಂಡರು,
ಜ್ಞಾನ ಪ್ರಸಾದವ ಅಕ್ಕಗಳು ಕೊಂಡರು,
ಶೂನ್ಯ ಪ್ರಸಾದವ ಪ್ರಭುದೇವರು ಕೊಂಡರು.
ಎನಗಿನ್ನೆಂತಯ್ಯಾ? ಮುಳ್ಳುಗುತ್ತೆ ತೆರಹಿಲ್ಲ.
ಇದು ಕಾರಣ, ಕೂಡಲಚೆನ್ನಸಂಗನ ಶರಣರ
ಒಕ್ಕು ಮಿಕ್ಕ ಪ್ರಸಾದವೆನಗಾಯಿತ್ತು.
Art
Manuscript
Music
Courtesy:
Transliteration
Dāsa prasādava dāsimayyagaḷu koṇḍaru,
prāṇa prasādava siriyāḷa koṇḍa,
samate prasādava ballāḷa koṇḍa,
jaṅgama prasādava basavaṇṇa koṇḍa,
samaya prasādava bibba bācayyagaḷu koṇḍaru,
jñāna prasādava akkagaḷu koṇḍaru,
śūn'ya prasādava prabhudēvaru koṇḍaru.
Enaginnentayyā? Muḷḷugutte terahilla.
Idu kāraṇa, kūḍalacennasaṅgana śaraṇara
okku mikka prasādavenagāyittu.