Index   ವಚನ - 848    Search  
 
ಭಕ್ತನಾದಡೆ ಲಿಂಗಸ್ಥಲವ ಮೆಟ್ಟಲಾಗದು, ಶರಣನಾದಡೆ ಭಕ್ತಸ್ಥಲವ ಮೆಟ್ಟಲಾಗದು, ಲಿಂಗೈಕ್ಯನಾದಡೆ ಪ್ರಸಾದಿಸ್ಥಲವ ಮೆಟ್ಟಲಾಗದು. ಈ ತ್ರಿವಿಧ ಸಾಹಿತ್ಯ ಮಹಾಬೆಳಗಿನ ಬೆಳಗು ಕೂಡಲಚೆನ್ನಸಂಗಮದೇವ.