Index   ವಚನ - 850    Search  
 
ಸಾರಾಯ ಪದಾರ್ಥವನಾರಯ್ಯಾ ಅರಿವರು? ಆರರಿಂದ ಬೇರೆ ತೋರಲಿಲ್ಲೆನಿಸಿತ್ತು. ಹೆಸರೆನಿಸಿಕೊಂಬಡೆ ಹೆಸರು ಮುನ್ನಿಲ್ಲ, ಹೆಸರೆಲ್ಲವೂ ಪರಿಣಮಿಸಲಾಯಿತ್ತು. ಕಂಡೆನೆಂದಡೆ ಕಾಣಲಾಯಿತ್ತು, ಕಂಡು ನುಡಿಸುವಂಥದಲ್ಲ, ಕಂಡಾತ ಕಲಿಕೆಯೊಳಗಿಲ್ಲದಂತಿಪ್ಪ, ಕಾರ್ಯವಿಲ್ಲದ ಕಾರಣಕರ್ತ. ಆರರಿಂದತ್ತ ತಾನಿಲ್ಲೆಂದೆನಿಸಿಕೊಂಡ ಕೂಡಲಚೆನ್ನಸಂಗಯ್ಯಾ, ಆ ಮಹಾಲಿಂಗದ ಅನುಭಾವ ಶರಣಫಲದ ಸಂಬಂಧವ ಮೀರಿತ್ತು.