Index   ವಚನ - 862    Search  
 
ಓದಿದ ವೇದದಲ್ಲಿ ಏ[ನಿ]ಹುದಯ್ಯಾ? ಓದಿಸಬಾರದಂಥ ಲಿಂಗಸ್ಥಲ. ಸಾಧಿಸಿದ ಶಾಸ್ತ್ರದಲೇ[ನಿ]ಹುದಯ್ಯಾ? ಸಾಧ್ಯವಾಗದಂಥ ಜಂಗಮಸ್ಥಲ. ತರ್ಕಿಸಿದ ತರ್ಕದಲ್ಲಿ ಏ[ನಿ]ಹುದಯ್ಯಾ? ತರ್ಕಕ್ಕಗೋಚರವಹಂಥ ಪ್ರಸಾದಿಸ್ಥಲ. ಓದು ವೇದಶಾಸ್ತ್ರ ತರ್ಕಕ್ಕಗೋಚರ ಕೂಡಲಚೆನ್ನಸಂಗಾ ನಿಮ್ಮ ಶರಣ.