Index   ವಚನ - 865    Search  
 
ತ್ರಿವಿಧವಿರಹಿತಲಿಂಗ, ಆಗಮವಿರಹಿತ ಪ್ರಸಾದಿ, ಲಿಂಗವಿಲ್ಲದ ಜಂಗಮ ಜಂಗಮವಿಲ್ಲದ ಲಿಂಗ, ಇದ ಕೇಳಿ ಗುರುವಿಲ್ಲದ ಶಿಷ್ಯ, ಶಿಷ್ಯನಿಲ್ಲದ ಗುರು, ಇವೆಲ್ಲವ ಕಂಡು ಯುಕ್ತಿಯಿಲ್ಲದ ಭಕ್ತಿ, ಭಕ್ತಿಯಿಲ್ಲದ ಯುಕ್ತಿ ನೋಡಯ್ಯಾ! ಇದು ಐಕ್ಯಸ್ಥಲವಲ್ಲ, ನಿಃಸ್ಥಲ ನಿರವಯ ಕೂಡಲಚೆನ್ನಸಂಗಾ ನಿಮ್ಮ ಶರಣ.