Index   ವಚನ - 866    Search  
 
ಶ್ರೀ ಗುರುಲಿಂಗ ತ್ರಿವಿಧ: ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರು. ಶಿವಲಿಂಗ ತ್ರಿವಿಧ: ಕ್ರಿಯಾಲಿಂಗ, ಜ್ಞಾನಲಿಂಗ, ಭಾವಲಿಂಗ. ಜಂಗಮಲಿಂಗ ತ್ರಿವಿಧ: ಸ್ವಯ ಚರ ಪರ-ಇಂತು ಆಚಾರಲಿಂಗ ಸ್ಥಲ 9. ಆಗಮಲಿಂಗ ತ್ರಿವಿಧ: ಕ್ರಿಯಾಗಮ, ಭಾವಾಗಮ, ಜ್ಞಾನಾಗಮ ಕಾಯಲಿಂಗ ತ್ರಿವಿಧ: ಸಕಾಯ, ಆಕಾಯ, ಪರಕಾಯ. ಆಚಾರಲಿಂಗ ತ್ರಿವಿಧ: ಧರ್ಮಾಚಾರ, ಭಾವಾಚಾರ, ಜ್ಞಾನಾಚಾರ. ಇಂತು ಗುರುಲಿಂಗ ಸ್ಥಲ 9 -ಉಭಯಸ್ಥಲ 18. ಅನುಗ್ರಹಲಿಂಗ ತ್ರಿವಿಧ: ಕಾರ್ಯಾನುಗ್ರಹ, ಇಂದ್ರಿಯಾನುಗ್ರಹ,ಪ್ರಾಣಾನುಗ್ರಹ. ಅರ್ಪಿತಲಿಂಗ ತ್ರಿವಿಧ: ಕಾಯಾರ್ಪಿತ, ಕರಣಾರ್ಪಿತ, ಭಾವಾರ್ಪಿತ. ತನುಗುಣಲಿಂಗ ತ್ರಿವಿಧ: ಶಿಷ್ಯ, ಶುಶ್ರೂಷ, ಸೇವ್ಯ. ಇಂತು ಸ್ಥಲ 9 -ತೃತೀಯ ಸ್ಥಲ 27 . ಒಲವುಲಿಂಗ ತ್ರಿವಿಧ: ಜೀವಾತ್ಮ, ಅಂತರಾತ್ಮ, ಪರಮಾತ್ಮ. ನಿರೂಪಲಿಂಗ ತ್ರಿವಿಧ: ನಿರ್ದೇಹಾಗಮ, ನಿರ್ಭಾವಾಗಮ, ನಷ್ಟಾಗಮ. ಪ್ರಸಾದಲಿಂಗ ತ್ರಿವಿಧ: ಆದಿ ಪ್ರಸಾದಿ, ಅಂತ್ಯ ಪ್ರಸಾದಿ, ಸೇವ್ಯ ಪ್ರಸಾದಿ. ಪಾದೋದಕಲಿಂಗ ತ್ರಿವಿಧ: ದೀಕ್ಷಾಪಾದೋದಕ, ಶಿಕ್ಷಾಪಾದೋದಕ, ಜ್ಞಾನಪಾದೋದಕ. ಇಂತು ಸ್ಥಲ 12_ ಚತುರ್ಥಸ್ಥಲ 39. ಮೀರಿದ ಕ್ರಿಯಾ ದೀಕ್ಷಾಕ್ರಮದಿಂದತ್ತತ್ತಲು ನಿಃಪತಿಲಿಂಗ ತ್ರಿವಿಧ: ಕ್ರಿಯಾ ನಿಃಪತಿ, ಭಾವನಿಃಪ, ಜ್ಞಾನನಿಃಪತಿ. ಆಕಾಶಲಿಂಗ ತ್ರಿವಿಧ: ಪಿಂಡಾಕಾಶ, ಬಿಂದ್ವಾಕಾಶ, ಮಹದಾಕಾಶ. ಪ್ರಕಾಶಲಿಂಗ ತ್ರಿವಿಧ: ಕ್ರಿಯಾಪ್ರಕಾಶ, ಭಾವಪ್ರಕಾಶ, ಜ್ಞಾನಪ್ರಕಾಶ. ಇಂತು ಸ್ಥಲ 9, ಪಂಚಮಸ್ಥಲ 48. ಆ ಲಿಂಗೈಕ್ಯ ಕೊಂಡುದು ಪ್ರಸಾದ, ನಿಂದುದೋಗರ, ಚರಾಚರನಾಸ್ತಿ- ಇಂತು ತ್ರಿವಿಧ. ಭಾಂಡ, ಭಾಜನ, ಅಂಗಲೇಪ-ಇಂತು ತ್ರಿವಿಧ. ಸ್ವಯ ಚರ ಪರವರಿಯ[ದ], ಭಾವಾಭಾವನಷ್ಟ, ಜ್ಞಾನಶೂನ್ಯ- ಇಂತು ಸ್ಥಲ 9. ಷಡುಸ್ಥಲ 57. ಇಂತಿವೆಲ್ಲ ಸ್ಥಲಂಗಳನೊಳಕೊಂಡ ಮಹಾಮಹಿಮನು ಜ್ಞಾನಿಯಲ್ಲ ಅಜ್ಞಾನಿಯಲ್ಲ, ಶೂನ್ಯನಲ್ಲ. ಅಶೂನ್ಯನಲ್ಲ, ಉಭಯಕುಳ ತಾನೆಂದರಿದ ಪರಮಜ್ಞಾನಿಗೆ ಕೊಳುಕೊಡೆಯಿಲ್ಲ. ಸಾಕಾರ ಸಂಬಂಧವನರಿಯ, ನಿತ್ಯಮುಕ್ತ, ನಿರವಯ, ಉಭಯಾತ್ಮಕ ತಾನು ಕೂಡಲಚೆನ್ನಸಂಗನೆಂದು ಎನ್ನದ ಸುಯಿಧಾನಿ.