Index   ವಚನ - 867    Search  
 
ಸಾಕಾರ ಹದಿನೆಂಟು ಕುಳವನಂಗದಲ್ಲಿ ಆಚರಿಸುತ್ತ ಅಲ್ಲಲ್ಲಿಗೆ ಭಕ್ತ, ಅಲ್ಲಲ್ಲಿಗೆ ಮಾಹೇಶ್ವರ, ಅಲ್ಲಲ್ಲಿಗೆ ಪ್ರಸಾದಿಯಾಗಿಪ್ಪ ಆ ಸಾಕಾರವನೇನೆಂದುಪಮಿಸುವೆ! ನಿರಾಕಾರ ಹದಿನೆಂಟುಕುಳವನಾತ್ಮನಲ್ಲಿ ಆಚರಿಸುತ್ತ ಅಲ್ಲಲ್ಲಿಗೆ ಪ್ರಾಣಲಿಂಗಿ, ಅಲ್ಲಲ್ಲಿಗೆ ಶರಣ, ಅಲ್ಲಲ್ಲಿಗೆ ಐಕ್ಯನಾಗಿಪ್ಪ ಆ ನಿರಾಕಾರವನೇನೆಂದುಪಮಿಸುವೆ! ಇಂತು ಉಭಯಸ್ಥಲ ಒಂದಾಗಿ ನಿಂದ ನಿಜದ ಘನದಲ್ಲಿ ಕುಳವಡಗಿತ್ತು, ಕೂಡಲಚೆನ್ನಸಂಗಾ.