Index   ವಚನ - 878    Search  
 
ಅಂಗದ ಮೇಲೆ ಲಿಂಗವುಳ್ಳುದೆಲ್ಲಾ ಸಂಗಮನಾಥನೆಂಬ ಭಾವ ಬಸವಣ್ಣಂಗಾಯಿತ್ತಲ್ಲದೆ, ಎನಗೆ ಆ ಭಾವವಿಲ್ಲ ನೋಡಾ. ಲಿಂಗೈಕ್ಯ ಶರಣರ ಕಂಡಡೆ ಕರುಣಾಮೃತ ಸುರಿವುದೆನಗೆ. ಅವರ ಪಾದಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದೆನ್ನ ಮನವು. ಕೂಡಲಚೆನ್ನಸಂಗಮದೇವಾ, ನಿಮ್ಮ ಶರಣ ಪ್ರಭುವೆಂಬ ಜಂಗಮವ ಕಂಡು ಪೂಜಿಸಿ ಪೂಜಿಸಿ ದಣಿಯದೆನ್ನ ಮನವು.