Index   ವಚನ - 887    Search  
 
ಅಂಗದಲ್ಲಿ ಲಿಂಗವರತು, ಲಿಂಗದಲ್ಲಿ ಅಂಗವರತು ಒಡಲುಪಾಧಿ ಎಂಬುದಿಲ್ಲ ನೋಡಾ! ನಿಂದಡೆ ನೆಳಲಿಲ್ಲ ಸುಳಿದಡೆ ಹೆಜ್ಜೆಯಿಲ್ಲ, ಅಪರಿಮಿತ ಘನಮಹಿಮನನೇನೆಂಬೆನಯ್ಯಾ! ಶಬ್ದವನರಿದು ಸಾರಾಯನಲ್ಲ, ಗತವಿಡಿದು ಅಜಡನಲ್ಲ, ಈ ಎರಡೂ ಅಳಿದುಳಿದ ನಿಶ್ಚಿಂತನು ತನಗೆ ತಾ ನಿಜವಾದ, ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುದೇವರ ಪಾದಕ್ಕೆ ನಮೋ ನಮೋ ಎನುತಿರ್ದೆನು.