ಅಂಗಪ್ರಸಾದಿ ಆತ್ಮದ್ರೋಹಿ, ಲಿಂಗಪ್ರಸಾದಿ ಲಿಂಗದ್ರೋಹಿ,
ಜಂಗಮಪ್ರಸಾದಿ ಜಂಗಮದ್ರೋಹಿ ಎಂದುದಾಗಿ,
ಭಾವದಿಂದ ಪ್ರಸಾದವ ಕೊಂಡು,
ಅನುಭಾವದಿಂದತಿಗಳೆದಡೆ
ಅದು ಪ್ರಸಾದವಲ್ಲ, ಮಾಂಸ,
ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ
ಪ್ರಸಾದಸಂಪತ್ತ ಬಸವಣ್ಣನೆ ಬಲ್ಲ.
Art
Manuscript
Music
Courtesy:
Transliteration
Aṅgaprasādi ātmadrōhi, liṅgaprasādi liṅgadrōhi,
jaṅgamaprasādi jaṅgamadrōhi endudāgi,
bhāvadinda prasādava koṇḍu,
anubhāvadindatigaḷedaḍe
adu prasādavalla, mānsa,
idu kāraṇa-kūḍalacennasaṅgayyanalli
prasādasampatta basavaṇṇane balla.