Index   ವಚನ - 895    Search  
 
ಅಂಗವ ಬಿಟ್ಟು ಹೋಹ ಪ್ರಾಣಕ್ಕೆ ಲಿಂಗವಿಲ್ಲ ಎಂದೆಂಬರು, ಒಡಂಬಡಿಸಿಹೆನು ಕೇಳಿರಣ್ಣಾ. ಹಿಂಗಿದ ಪುಷ್ಪದ ಪರಿಮಳವನುಂಡೆಳ್ಳು ಅವು ತಮ್ಮಂಗವ ಬಿಟ್ಟು ಹೋಹಾಗ ಕಮ್ಮೆಣ್ಣೆಯಾಗದಿಪ್ಪುವೆ? ಲಿಂಗೈಕ್ಯರು ಅಳಿದಡೆ, ಕೈಲಾಸದಲ್ಲಿ ತಮ್ಮ ಇಷ್ಟಲಿಂಗಸಹವಾಗಿಪ್ಪರು ನೋಡಾ ಕೂಡಲಚೆನ್ನಸಂಗಮದೇವಾ.