Index   ವಚನ - 896    Search  
 
ಅಂಗವಿಲ್ಲೆಂಬಲ್ಲಿಯೆ ಅಂಗಶಂಕೆ ಬಿಡದು, ಲಿಂಗವುಂಟೆಂಬಲ್ಲಿಯೆ ಲಿಂಗಶಂಕೆ ಬಿಡದು. ಇಲ್ಲೆಂಬುದಕ್ಕೆ ಉಂಟೆಂಬುದೆ ಮರಹು, ಉಂಟೆಂಬುದಕ್ಕೆ ಇಲ್ಲೆಂಬುದೆ ಮರಹು. ಉಂಟಿಲ್ಲೆಂಬುದಳಿದಲ್ಲದೆ ಪ್ರಾಣಲಿಂಗಸಂಬಂಧ ಸ್ವಯವಾಗದು, ಕೂಡಲಚೆನ್ನಸಂಗಯ್ಯನಲ್ಲಿ ಪ್ರಾಣಲಿಂಗಸಂಬಂಧ ನಿನಗೆಲ್ಲಿಯದು ಹೇಳಾ ಸಿದ್ಧರಾಮಯ್ಯ?