Index   ವಚನ - 921    Search  
 
ಅಜ್ಞಾನವೆಂಬ ಕಾಳಿಕೆವಿಡಿದ ಮನದ ಮೋಹವ ಪರಿಹರಿಸಿದ ಪರಿಯ ನೋಡಿರೆ! ಒಮ್ಮೆ ಕಾಸಿ ಒಮ್ಮೆ ಕರಗಿಸಿ ಒಮ್ಮೆ ಬಣ್ಣವಿಟ್ಟು ಎನ್ನ ಮನದ ಮೋಹವ ಕಳೆದೆನಯ್ಯಾ, ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಬಸವಣ್ಣನು.