Index   ವಚನ - 934    Search  
 
[ಅ]ನಾದಿ ಕೂಳಸನ್ಮತವಾದ ಏಕಾದಶಪ್ರಸಾದದ ಕುಳವ ತಿಳಿವಡೆ; ಪ್ರಥಮದಲ್ಲಿ ಗುರುಪ್ರಸಾದ, ದ್ವಿತೀಯದಲ್ಲಿ ಲಿಂಗಪ್ರಸಾದ, ತೃತೀಯದಲ್ಲಿ ಜಂಗಮಪ್ರಸಾದ, ಚತುರ್ಥದಲ್ಲಿ ಪ್ರಸಾದಿಪ್ರಸಾದ ಪಂಚಮದಲ್ಲಿ ಅಪ್ಯಾಯನ ಪ್ರಸಾದ, ಷಷ್ಠಮದಲ್ಲಿ ಸಮಯಪ್ರಸಾದ, ಸಪ್ತಮದಲ್ಲಿ ಪಂಚೇಂದ್ರಿಯವಿರಹಿತ ಪ್ರಸಾದ, ಅಷ್ಟಮದಲ್ಲಿ ಅಂತಃಕರಣ ಚತುಷ್ಟಯವಿರಹಿತ ಪ್ರಸಾದ, ನವಮದಲ್ಲಿ ಸದ್ಭಾವಪ್ರಸಾದ, ದಶಮದಲ್ಲಿ ಸಮತಾಪ್ರಸಾದ, ಏಕಾದಶದಲ್ಲಿ ಜ್ಞಾನಪ್ರಸಾದ. ಇಂತೀ ಏಕಾದಶ ಪ್ರಸಾದಸ್ಥಲವನತಿಗಳೆದ ಕೂಡಲಚೆನ್ನಸಂಗಯ್ಯನಲ್ಲಿ ಐಕ್ಯಪ್ರಸಾದಿಗೆ ನಮೋ ನಮೋ ಎಂಬೆನು.