Index   ವಚನ - 959    Search  
 
ಅಯ್ಯಾ, ಶ್ರೀವಿಭೂತಿಯ ಧರಿಸುವ ಭೇದವೆಂತೆಂದಡೆ: ಸಹಜಲಿಂಗಧಾರಕರು ಎಂಟುಸ್ಥಾನದಲ್ಲಿ ಧರಿಸುವುದಯ್ಯಾ. ಕ್ರಿಯಾದೀಕ್ಷಾನ್ವಿತರಾದ ಉಪಾಧಿಭಕ್ತರು ಹದಿನಾರು ಸ್ಥಾನದಲ್ಲಿ ಧರಿಸುವುದಯ್ಯಾ. ಕ್ರಿಯಾದೀಕ್ಷೆ, ಮಂತ್ರದೀಕ್ಷೆಯುಕ್ತರಾದ ನಿರುಪಾಧಿಭಕ್ತರು ಮೂವತ್ತೆರಡು ಸ್ಥಾನದಲ್ಲಿ ಧರಿಸುವುದಯ್ಯಾ. ಕ್ರಿಯಾದೀಕ್ಷೆ ಮಂತ್ರದೀಕ್ಷೆ ವೇಧಾದೀಕ್ಷೆಯುಕ್ತರಾದ ಸಹಜಭಕ್ತರು ಮೂವತ್ತಾರು ಸ್ಥಾನದಲ್ಲಿ ಧರಿಸುವುದಯ್ಯಾ. ಕ್ರಿಯಾದೀಕ್ಷೆ ಮಂತ್ರದೀಕ್ಷೆ ವೇಧಾದೀಕ್ಷೆ ಸಚ್ಚಿದಾನಂದದೀಕ್ಷಾಯುಕ್ತರಾದ ನಿರ್ವಂಚನಭಕ್ತರು ನಾಲ್ವತ್ತುನಾಲ್ಕು ಸ್ಥಾನದಲ್ಲಿ ಧರಿಸುವುದಯ್ಯಾ. ಕ್ರಿಯಾ-ಮಂತ್ರ-ವೇಧಾ-ಸಚ್ಚಿದಾನಂದ-ನಿರ್ವಾಣಪದದೀಕ್ಷಾ ಸಮನ್ವಿತರಾದ ಸದ್ಭಕ್ತಶರಣಗಣಂಗಳು, ಆಪಾದಮಸ್ತಕ ಪರಿಯಂತರ ಸ್ನಾನ ಧೂಳನವ ಮಾಡಿ ನಾಲ್ವತ್ತೆಂಟು ಸ್ಥಾನದಲ್ಲಿ ಮಂತ್ರಸ್ಮರಣೆಯಿಂದ ತ್ರಿಪುಂಡ್ರವ ಧರಿಸುವುದಯ್ಯಾ ಕೂಡಲಚೆನ್ನಸಂಗಮದೇವಾ.