ಕರುಣಜಲ ವಿನಯಜಲ ಸಮತಾಜಲ.
ಕರುಣಜಲವೆ ಗುರುಪಾದೋದಕ,
ವಿನಯಜಲವೆ ಲಿಂಗಪಾದೋದಕ,
ಸಮತಾಜಲವೆ ಜಂಗಮಪಾದೋದಕ.
ಗುರುಪಾದೋದಕದಿಂದ ಸಂಚಿತಕರ್ಮನಾಸ್ತಿ,
ಲಿಂಗಪಾದೋದಕದಿಂದ ಪ್ರಾರಬ್ಧಕರ್ಮನಾಸ್ತಿ,
ಜಂಗಮಪಾದೋದಕದಿಂದ ಆಗಾಮಿಕರ್ಮನಾಸ್ತಿ.
ಇಂತೀ ತ್ರಿವಿಧೋದಕದಲ್ಲಿ ತ್ರಿವಿಧಕರ್ಮನಾಸ್ತಿ,
ಇದು ಕಾರಣ- ಕೂಡಲಚೆನ್ನಸಂಗಮದೇವಾ
ತ್ರಿವಿಧೋದಕವ ನಿಮ್ಮ ಶರಣನೆ ಬಲ್ಲ.
Art
Manuscript
Music
Courtesy:
Album : Vachana Vaibhava Songs, Singer : Rajesh Krishnan, Devendhrakumar Mudhoal Music : M S Maruthi Label : Ashwini Audio
Transliteration
Karasthaladalli liṅgava dharisikoṇḍu,
śivane ārōgaṇeya
māḍ'̔ihanendu māḍalāgadu.
Liṅgabhājanadalli sahabhōjanava
māḍuva uddēśigaḷanēnembeyyā?
Māḍalāgadu, māḍalāgadu! Ēnu kāraṇa?
-Indriyavikāra biḍadannakka,
tanuvikāra biḍadannakka,
saṅkalpaṁ ca vikalpaṁ ca bhāvābhāvavivarjitaḥ|
yasya antaḥkarē liṅgaṁ naivēdyaṁ saha bhōjanaṁ||
endudāgi,
idu kāraṇa
kūḍalacennasaṅgayyā
sahabhōjana nāyakanaraka.