Index   ವಚನ - 1130    Search  
 
ಕಾಮಿ ಮಜ್ಜನಕ್ಕೆ ನೀಡಿದರೆ ರಕ್ತದ ಧಾರೆ. ಕ್ರೋಧಿ ಪುಷ್ಪವನರ್ಪಿಸಿದರೆ ಕತ್ತಿಯ ಮೊನೆ. ಲೋಭಿ ರುದ್ರಾಕ್ಷೆಯ ಧರಿಸಿದರೆ ಗಿರಿಕೆ. ಮೋಹಿ ವಿಭೂತಿಯ ಧರಿಸಿದರೆ ಸುಣ್ಣದ ಗರ್ತ. ಮದಿ ಲಿಂಗವ ಕಟ್ಟಿದರೆ ಎತ್ತುಗಲ್ಲು. ಮತ್ಸರಿ ಪಾದೋದಕ ಪ್ರಸಾದವ ಕೊಂಡರೆ ಕಾಳಕೂಟದ ವಿಷ. ಕೂಡಲಚೆನ್ನಸಂಗಮದೇವರಲ್ಲಿ ಮದಮತ್ಸರವ ಬಿಟ್ಟವರು ಅಪೂರ್ವ.