Index   ವಚನ - 1141    Search  
 
ಕಾಯ ವಿಕಾರವಳಿದಲ್ಲದೆ ಮಾಯವಿಕಾರವಳಿಯದು, ಮಾಯವಿಕಾರವಳಿದಲ್ಲದೆ ಭವನಾಶವಾಗದು, ಭವನಾಶವಾದಲ್ಲದೆ ಲಿಂಗಸಂಬಂಧವಳವಡದು, ಲಿಂಗಸಂಬಂಧವಳವಟ್ಟಲ್ಲದೆ ಸುಖವು ಸಾಧ್ಯವಾಗದು, ಪರಮಸುಖಪರಿಣಾಮಕ್ಕೆ ಮಹಾನುಭಾವಿಗಳ ಸಂಗವೆ ಬೇಕು. ಮಹಾನುಭಾವಿಗಳ ಸಂಗದಿಂದಲ್ಲದೆ ವಿಶ್ರಾಮವಿಲ್ಲ. ಮಹಾನುಭಾವಸ್ವಾಯತವಿಲ್ಲದ ಸಮಾಧಾನಸಂಬಂಧವನೆನ್ನದೆನ್ನಬಹುದೆ? ಘನಮನವೇಧಿಸಿ ಆದಿಯನಾದಿಯನೊಳಕೊಂಡು ಆಧಾರವಿಲ್ಲದ ನಿಲವು ಸಾಧ್ಯವಾಯಿತ್ತು ನೋಡಾ. ಕೂಡಲಚೆನ್ನಸಂಗನಶರಣ ಪ್ರಭುದೇವರು ಅಜಾತನೆಂಬ ಭೇದವೆನಗಿಂದು ಕಾಣಬಂದಿತ್ತು.