ಕಾಲಿಲ್ಲವೆಂಬರಯ್ಯಾ ಪ್ರಭುದೇವರ,
ಸಂಸಾರಸೂತಕವ ಮೆಟ್ಟನಾಗಿ.
ಕೈಯಿಲ್ಲವೆಂಬರಯ್ಯಾ ಪ್ರಭುದೇವರ,
ಪರಧನವ ಕೊಳ್ಳನಾಗಿ.
ಕಿವಿಯಿಲ್ಲವೆಂಬರಯ್ಯಾ ಪ್ರಭುದೇವರ,
ಅನ್ಯವ ಕೇಳನಾಗಿ.
ಮೂಗಿಲ್ಲವೆಂಬರಯ್ಯಾ ಪ್ರಭುದೇವರ,
ದುರ್ಗಂಧಕ್ಕೆಳಸನಾಗಿ.
ಎದೆಯಿಲ್ಲವೆಂಬರಯ್ಯಾ ಪ್ರಭುದೇವರ,
ಪರಸ್ತ್ರೀಯನಪ್ಪನಾಗಿ.
ಇದು ಕಾರಣ-ಕೂಡಲಚೆನ್ನಸಂಗಮದೇವಾ
ಪ್ರಭುದೇವರ ಒಕ್ಕುಮಿಕ್ಕ ಪ್ರಸಾದವ ಕೊಂಡು
ನಾನು ಧನ್ಯನಾದೆನು ಕಾಣಾ ಸಂಗನಬಸವಣ್ಣಾ.
Art
Manuscript
Music
Courtesy:
Transliteration
Kālillavembarayyā prabhudēvara,
sansārasūtakava meṭṭanāgi.
Kaiyillavembarayyā prabhudēvara,
paradhanava koḷḷanāgi.
Kiviyillavembarayyā prabhudēvara,
an'yava kēḷanāgi.
Mūgillavembarayyā prabhudēvara,
durgandhakkeḷasanāgi.
Edeyillavembarayyā prabhudēvara,
parastrīyanappanāgi.
Idu kāraṇa-kūḍalacennasaṅgamadēvā
prabhudēvara okkumikka prasādava koṇḍu
nānu dhan'yanādenu kāṇā saṅganabasavaṇṇā.