Index   ವಚನ - 1147    Search  
 
ಕಾಲವನಾದಿ ಕರ್ಮವನಾದಿ ಜೀವವನಾದಿಯಾದಡೆಯೂ ಆಗಲಿ, ಘನನಿಧಿಶಕ್ತಿಯನರಿದಲ್ಲದೆ, ಘನನಿಲಯಶಕ್ತಿಯನರಿಯಬಾರದು. ಘನನಿಲಯಶಕ್ತಿಯನರಿದಲ್ಲದೆ, ತನೂದ್ವಹನಶಕ್ತಿಯನರಿಯಬಾರದು. ತನೂದ್ವಹನಶಕ್ತಿಯನರಿದಲ್ಲದೆ, ಆದಿಮಧ್ಯಾವಸಾನವನರಿಯಬಾರದು. ಆದಿಮಧ್ಯಾವಸಾನವನರಿದಲ್ಲದೆ, ಪಿಂಡಬ್ರಹ್ಮಾಂಡವನರಿಯಬಾರದು. ಪಿಂಡಬ್ರಹ್ಮಾಂಡವನರಿದಲ್ಲದೆ, ಉನ್ಮನಿಯ ಮುಖವ ಕಾಣಬಾರದು. ಉನ್ಮನಿಯ ಮುಖವ ಕಂಡಲ್ಲದೆ, ಲಿಂಗವ ಕಾಣಬಾರದು. ಲಿಂಗವ ಕಂಡು ಗಹಗಹಿಸಿ ಕೂಡಿದಲ್ಲದೆ, ಮರ್ತ್ಯದ ಹಂಗು ಹರಿಯದು. ಮರ್ತ್ಯದ ಹಂಗು ಹರಿದಲ್ಲದೆ, ಭವಂ ನಾಸ್ತಿಯಾಗದು ಕಾಣಾ ಕೂಡಲಚೆನ್ನಸಂಗಮದೇವಾ.