Index   ವಚನ - 1149    Search  
 
ಕಾವಿ ಕಾಷಾಯಂಬರ ಜಡೆಮಾಲೆಯ ಧರಿಸಿದರೇನು, ಜಂಗಮವಾಗಬಲ್ಲನೆ? ಸಾಕಾರದಲ್ಲಿ ಸನುಮತರಲ್ಲ, ನಿರಾಕಾರದಲ್ಲಿ ನಿರುತರಲ್ಲ. ತುರುಬು ಜಡೆ ಬೋಳೆನ್ನದೆ ಅರಿವುಳ್ಳಾತನೆ ಜಂಗಮ. ಅರಿವಿಲ್ಲದೆಲ್ಲ ವೇಷ ಕಾಣಾ, ಕೂಡಲಚೆನ್ನಸಂಗಮದೇವಾ.