Index   ವಚನ - 1148    Search  
 
ಕಾಲಿಲ್ಲವೆಂಬರಯ್ಯಾ ಪ್ರಭುದೇವರ, ಸಂಸಾರಸೂತಕವ ಮೆಟ್ಟನಾಗಿ. ಕೈಯಿಲ್ಲವೆಂಬರಯ್ಯಾ ಪ್ರಭುದೇವರ, ಪರಧನವ ಕೊಳ್ಳನಾಗಿ. ಕಿವಿಯಿಲ್ಲವೆಂಬರಯ್ಯಾ ಪ್ರಭುದೇವರ, ಅನ್ಯವ ಕೇಳನಾಗಿ. ಮೂಗಿಲ್ಲವೆಂಬರಯ್ಯಾ ಪ್ರಭುದೇವರ, ದುರ್ಗಂಧಕ್ಕೆಳಸನಾಗಿ. ಎದೆಯಿಲ್ಲವೆಂಬರಯ್ಯಾ ಪ್ರಭುದೇವರ, ಪರಸ್ತ್ರೀಯನಪ್ಪನಾಗಿ. ಇದು ಕಾರಣ-ಕೂಡಲಚೆನ್ನಸಂಗಮದೇವಾ ಪ್ರಭುದೇವರ ಒಕ್ಕುಮಿಕ್ಕ ಪ್ರಸಾದವ ಕೊಂಡು ನಾನು ಧನ್ಯನಾದೆನು ಕಾಣಾ ಸಂಗನಬಸವಣ್ಣಾ.