Index   ವಚನ - 1150    Search  
 
ಕಾವಿ ಕಾಷಾಂಬರವ ತೊಟ್ಟವ ಜಂಗಮವೆ? ಮುರುಹು ಮುದ್ರೆಯನಿಟ್ಟವ ಜಂಗಮವೆ? ಬರಿಯ ಬೋಳುಗಳೆಲ್ಲ ಜಂಗಮವೆ? ವೇಷಧಾರಿಗಳೆಲ್ಲ ಜಂಗಮವೆ? ಅಜ್ಞಾನಿಗಳೆಲ್ಲ ಜಂಗಮವೆ? ಭೂಭಾರಿಗಳೆಲ್ಲ ಜಂಗಮವೆ? ಅಲ್ಲ. ಜಂಗಮ ಮತ್ತೆಂ[ತೆಂ]ದರೆ: ಸೀಮೆಯಿಲ್ಲದ ನಿಸ್ಸೀಮ ಜಂಗಮ, ಆಸೆಯಿಲ್ಲದ ನಿರಾಸಕ ಜಂಗಮ, ಚಿಂತೆಯಿಲ್ಲದ ನಿಶ್ಚಿಂತ ಜಂಗಮ. ಇಂತಪ್ಪ ಜಂಗಮದ ಸುಳುಹು ಕಾಣದೆ ಕೂಡಲಚೆನ್ನಸಂಗಯ್ಯ ತಾನೇ ಜಂಗಮವಾದ.