Index   ವಚನ - 1161    Search  
 
ಕೃತ್ಯಕ್ಕೆ ಬಾರದ ಲಿಂಗವ ಕೃತ್ಯಕ್ಕೆ ತಂದವರಾರೊ? ವಾಙ್ಮನಸಗೋಚರ ಲಿಂಗವ, ಬೊಬ್ಬಿಡಲು ಎಡೆದೆರಹಿಲ್ಲದ ಪರಿಪೂರ್ಣಲಿಂಗವ, ಪರಾಪರಲಿಂಗವ, ಈ ಗುರು ಕೊಟ್ಟ, ಶಿಷ್ಯ ಕೊಂಡನೆಂಬ ರಚ್ಚೆಯ ಭಂಡರ ನೋಡಾ ಕೂಡಲಚೆನ್ನಸಂಗದೇವಾ.