Index   ವಚನ - 1160    Search  
 
ಕೃತಯುಗ ಹದಿನೇಳು ಲಕ್ಷದ ಮೇಲೆ ಇಪ್ಪತ್ತೆಂಟುಸಾವಿರ ವರುಷದಲ್ಲಿ ಕೇತಾರದೇವರು ಮೂಲಸ್ಥಾನ. ತ್ರೇತಾಯುಗ ಹನ್ನೆರಡು ಲಕ್ಷದ ಮೇಲೆ ತೊಂಬತ್ತಾರುಸಾವಿರ ವರುಷದಲ್ಲಿ ಸೇತುಬಂಧ ರಾಮೇಶ್ವರದೇವರು ಮೂಲಸ್ಥಾನ. ದ್ವಾಪರಯುಗ ಎಂಟುಲಕ್ಷದ ಮೇಲೆ ಅರವತ್ತುನಾಲ್ಕುಸಾವಿರ ವರುಷದಲ್ಲಿ ಸೌರಾಷ್ಟ್ರ ಸೋಮಯ್ಯದೇವರು ಮೂಲಸ್ಥಾನ. ಕಲಿಯುಗ ನಾಲ್ಕುಲಕ್ಷದ ಮೇಲೆ ಮೂವತ್ತೆರಡುಸಾವಿರ ವರುಷದಲ್ಲಿ ಶ್ರೀಶೈಲ ಚೆನ್ನಮಲ್ಲಿಕಾರ್ಜುನದೇವರು ಮೂಲಸ್ಥಾನ. ಇದು ಕಾರಣ, ಕೂಡಲಚೆನ್ನಸಂಗಯ್ಯ ಸಾಕ್ಷಿಯಾಗಿ ಭಕ್ತರಿಗೆ ಜಂಗಮವೆ ಮೂಲಸ್ಥಾನ.